ಮಕ್ಕಳ ಬೆಳವಣಿಗೆಗೆ ಸೂಕ್ತ ಬೆಳಗಿನ ಊಟ | Healthy Breakfast for Kids:

ಮಕ್ಕಳಿಗೆ ಪೋಷಕತೆಯ ಬೆಳಗಿನ ಊಟ


ಮಕ್ಕಳ ಬೆಳವಣಿಗೆಯಲ್ಲಿ ಬೆಳಗಿನ ಬ್ರೇಕ್ ಫಾಸ್ಟ್ ತುಂಬಾನೇ ಮುಖ್ಯ.

ಇತ್ತೀಚಿನ ದಿನಗಳಲ್ಲಿ
ಹೆಚ್ಚಿನ ಅಮ್ಮಂದಿರಿಗೆ ಇರುವ ದೊಡ್ಡ ಚಿಂತೆ ಏನೆಂದರೆ
“ಮಗು ಸರಿಯಾಗಿ ಊಟ ಮಾಡ್ತಿಲ್ಲ…” ಅನ್ನೋದು.
ಬೆಳಿಗ್ಗೆ ಎದ್ದ ತಕ್ಷಣ
“ಇವತ್ತು ಬ್ರೇಕ್‌ಫಾಸ್ಟ್ ಏನು ಮಾಡಲಿ?” ಅನ್ನೋ ಪ್ರಶ್ನೆ ಶುರುವಾಗುತ್ತದೆ.
ಆದರೆ ಮಕ್ಕಳ ಬೆಳವಣಿಗೆ, ಶಕ್ತಿ ಮತ್ತು ಮೆದುಳಿನ ಕಾರ್ಯಕ್ಕೆ
ಬೆಳಗಿನ ಉಪಹಾರ ತುಂಬಾನೇ ಮುಖ್ಯ ಪಾತ್ರ ವಹಿಸುತ್ತದೆ.

ಮಕ್ಕಳ ಬೆಳವಣಿಗೆಗೆ ಬೆಳಗಿನ ಉಪಹಾರದ ಮಹತ್ವ

ಮಕ್ಕಳು ದಿನವಿಡೀ ಚುರುಕಾಗಿ ಆಟವಾಡಲು
ದೇಹಕ್ಕೆ ಸರಿಯಾದ ಶಕ್ತಿ ಬೇಕಾಗುತ್ತದೆ.
ಬೆಳಗಿನ ಉಪಹಾರ ದೇಹಕ್ಕೆ ಎನರ್ಜಿ ನೀಡುವುದಷ್ಟೇ ಅಲ್ಲ
ಮಕ್ಕಳ ಏಕಾಗ್ರತೆ ಮತ್ತು ನೆನಪಿನ ಶಕ್ತಿ ಹೆಚ್ಚಿಸಲು ಸಹ ಸಹಾಯ ಮಾಡಬಹುದು.
ಖಾಲಿ ಹೊಟ್ಟೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ
ಆಯಾಸ ಮತ್ತು ಗಮನ ಕೊರತೆ ಕಾಣಿಸಬಹುದು ಎಂದು ಕೆಲ ಅಧ್ಯಯನಗಳು ಹೇಳುತ್ತವೆ.
ಆದ್ದರಿಂದ ಆರೋಗ್ಯಕರ ಬ್ರೇಕ್‌ಫಾಸ್ಟ್ ಅಭ್ಯಾಸ ತುಂಬಾ ಮುಖ್ಯ.

ಮಕ್ಕಳಿಗೆ ಆರೋಗ್ಯಕರ ಬ್ರೇಕ್ ಫಾಸ್ಟ್ ರೆಸಿಪಿ. 

1)ಓಟ್ಸ್ ಮತ್ತು ಹಣ್ಣನ್ನು ಮಿಶ್ರಣ ಮಾಡಿಕೊಡಿ.



 ಪದಾರ್ಥಗಳು

• ½ cup rolled oats

• ಹಾಲು ಅಥವಾ ಬಾದಾಮಿ ಹಾಲು

• ಬಾಳೆಹಣ್ಣು / ಸೇಬು / ಸ್ಟ್ರಾಬೆರಿ

ಹೇಗೆ ಮಾಡಬೇಕು?

ಓಟ್ಸ್ ಅನ್ನು ಹಾಲಿನಲ್ಲಿ ಬೇಯಿಸಿ
ಮೇಲೆ ಸಣ್ಣಗೆ ಕತ್ತರಿಸಿದ ಹಣ್ಣುಗಳನ್ನು ಸೇರಿಸಿ ಮಕ್ಕಳಿಗೆ ಕೊಡಿ.
ಬಣ್ಣ ಬಣ್ಣದ ಹಣ್ಣುಗಳು ಇದ್ದರೆ ಮಕ್ಕಳು ಇನ್ನೂ ಖುಷಿಯಾಗಿ ತಿನ್ನುತ್ತಾರೆ.
ಪ್ರಯೋಜನ
ಓಟ್ಸ್‌ನಲ್ಲಿ ಇರುವ ಫೈಬರ್ ಅಂಶ
ಹೊಟ್ಟೆ ತುಂಬಿದ ಅನುಭವ ನೀಡಲು ಸಹಾಯ ಮಾಡಬಹುದು.
ಹಣ್ಣುಗಳಲ್ಲಿ ಇರುವ ವಿಟಮಿನ್ ಮತ್ತು ಖನಿಜಗಳು
ಮಕ್ಕಳ ದೈಹಿಕ ಬೆಳವಣಿಗೆಗೆ ಸಹಕಾರಿ ಆಗಬಹುದು.

2. ಬಣ್ಣ ಬಣ್ಣದ ದೋಸೆ

 ಬೇಕಾಗುವ ಪದಾರ್ಥಗಳು

• ದೋಸೆ ಹಿಟ್ಟು

• ಬೀಟ್ರೂಟ್ ರಸ

• ಕ್ಯಾರೆಟ್ ರಸ

• ಪಾಲಕ್ ಸೊಪ್ಪಿನ ರಸ

ಹೇಗೆ ಮಾಡಬೇಕು?

ಸಣ್ಣ ಸಣ್ಣ ಕಪ್‌ಗಳಲ್ಲಿ ದೋಸೆ ಹಿಟ್ಟು ತೆಗೆದು
ಪ್ರತ್ಯೇಕವಾಗಿ ಬೀಟ್ರೂಟ್, ಕ್ಯಾರೆಟ್ ಮತ್ತು ಪಾಲಕ್ ರಸ ಸೇರಿಸಿ.
ನಂತರ ಬಣ್ಣ ಬಣ್ಣದ ದೋಸೆ ಮಾಡಿ ಮಕ್ಕಳಿಗೆ ಕೊಡಿ.
ಮಕ್ಕಳು ಇದನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ.

ಪ್ರಯೋಜನ

ಬೀಟ್ರೂಟ್ ಮತ್ತು ಕ್ಯಾರೆಟ್‌ನಲ್ಲಿ ಇರುವ ವಿಟಮಿನ್ ಅಂಶಗಳು
ದೇಹಕ್ಕೆ ಪೌಷ್ಟಿಕಾಂಶ ನೀಡಲು ಸಹಾಯ ಮಾಡಬಹುದು.
ಪಾಲಕ್ ಸೊಪ್ಪಿನಲ್ಲಿ ಇರುವ ಐರನ್
ಮಕ್ಕಳ ಆರೋಗ್ಯಕ್ಕೆ ಉಪಯುಕ್ತವಾಗಬಹುದು.

3) ಅವಲಕ್ಕಿ ಅಥವಾ ಉಪ್ಪಿಟ್ಟು 

 ಬೇಕಾಗುವ ಪದಾರ್ಥಗಳು

• ಕಡಿಮೆ ಎಣ್ಣೆ

• ತರಕಾರಿಗಳು

• ಸಾಸಿವೆ

• ಲಿಂಬು ರಸ

ಪ್ರಯೋಜನ

ಅವಲಕ್ಕಿ ಮತ್ತು ಉಪ್ಪಿಟ್ಟು
ಹಗುರವಾಗಿ ಜೀರ್ಣವಾಗುವ ಉಪಹಾರಗಳಲ್ಲಿ ಒಂದಾಗಿದೆ.
ಇವು ದೇಹಕ್ಕೆ ಬೇಕಾದ ಕಾರ್ಬೋಹೈಡ್ರೇಟ್ ನೀಡಲು ಸಹಾಯ ಮಾಡಬಹುದು.
ಕಡಿಮೆ ಎಣ್ಣೆಯಲ್ಲಿ ಮಾಡಿದರೆ ಮಕ್ಕಳ ಹೊಟ್ಟೆಗೆ ಹಗುರವಾಗಿರುತ್ತದೆ.

4) ತಾಜಾ ಹಣ್ಣುಗಳ ರಸ

 ಬೇಕಾಗುವ ಪದಾರ್ಥಗಳು

• ಬಾಳೆಹಣ್ಣು ಅಥವಾ ಸ್ಟ್ರಾಬೆರಿ

•1 ಚಮಚ ಫ್ಲಾಕ್ಸೀಡ್ ಅಥವಾ ಚಿಯಾ ಬೀಜ

ಪ್ರಯೋಜನ

ತಾಜಾ ಹಣ್ಣಿನ ರಸ ಮಕ್ಕಳಿಗೆ ಶಕ್ತಿ ನೀಡಲು ಸಹಕಾರಿ ಆಗಬಹುದು.
ಫ್ಲಾಕ್ಸೀಡ್ ಮತ್ತು ಚಿಯಾ ಬೀಜಗಳಲ್ಲಿ ಇರುವ ಓಮೆಗಾ-3 ಅಂಶ
ಮೆದುಳಿನ ಆರೋಗ್ಯಕ್ಕೆ ಸಹಾಯ ಮಾಡಬಹುದು ಎಂದು ಹೇಳಲಾಗುತ್ತದೆ.
ಮನೆಯಲ್ಲಿ ತಯಾರಿಸಿದ ಜ್ಯೂಸ್
ಪ್ಯಾಕೆಟ್ ಡ್ರಿಂಕ್‌ಗಿಂತ ಉತ್ತಮ ಆಯ್ಕೆ. 

5) ಬಾದಾಮಿ ಹಾಲು

ರಾತ್ರಿ ಮಲಗುವ ಮೊದಲು
ಒಂದು ಲೋಟ ಬೆಚ್ಚಗಿನ ಬಾದಾಮಿ ಹಾಲು ಕೊಟ್ಟರೆ
ಮಕ್ಕಳು ಆರಾಮವಾಗಿ ನಿದ್ರೆ ಮಾಡಬಹುದು.
ಬಾದಾಮಿಯಲ್ಲಿ ಇರುವ ಪೋಷಕಾಂಶಗಳು
ನೆನಪಿನ ಶಕ್ತಿ ಮತ್ತು ಏಕಾಗ್ರತೆಗೆ ಸಹಕಾರಿ ಆಗಬಹುದು ಎಂದು ಹೇಳಲಾಗುತ್ತದೆ.
ಇದು ಮಕ್ಕಳ ದೈಹಿಕ ಬೆಳವಣಿಗೆಗೂ ಸಹ ಉಪಯುಕ್ತವಾಗಬಹುದು.

ನನ್ನ ಮತ್ತೊಂದು ಲೇಖನದಲ್ಲಿ" ಮೊಟ್ಟೆಯ ಯಾವ ಭಾಗ ಉತ್ತಮ" ಎಂದು ತಿಳಿಸಲಾಗಿದೆ ಅದನ್ನು ಸಹ ಓದಿ.👇

https://www.aarogyawithanitha.com/2026/05/motte-bili-bhaga-vs-haladi-bhaga.html


ಅಮ್ಮಂದಿರಿಗೆ ಕೆಲವು ಮುಖ್ಯ ಟಿಪ್ಸ್

✒ ಮಕ್ಕಳಿಗೆ ಸಾಕಷ್ಟು ನೀರು ಕುಡಿಯಲು ಕೊಡಿ.
✒ ಅಡುಗೆಯಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇರಲಿ.
✒ ಬಣ್ಣ ಬಣ್ಣದ ತರಕಾರಿಗಳನ್ನು ಮಕ್ಕಳ ಆಹಾರದಲ್ಲಿ ಸೇರಿಸಿ.
✒ ತುಂಬಾ ಎಣ್ಣೆ ಇರುವ ಆಹಾರ ಕಡಿಮೆ ಮಾಡಿ.
✒ ಬೆಳಗಿನ ಉಪಹಾರವನ್ನು ಸಮಯಕ್ಕೆ ಕೊಡಲು ಪ್ರಯತ್ನಿಸಿ.

ನನ್ನ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನನ್ನ ವೆಬ್ಸೈಟ್ ಅನ್ನು ಫಾಲೋ ಮಾಡಿ ನಿಮ್ಮ ಸ್ನೇಹಿತರೊಡನೆ ಹಂಚಿಕೊಳ್ಳಿ.




Comments

Popular posts from this blog

ಬಾಣಂತಿಯರಿಗಾಗಿ ಸುರಕ್ಷಿತ ಯೋಗ – ಡಿಲಿವರಿ ನಂತರ recovery

ಮಗು ದಪ್ಪವಾಗಲು ಅಜ್ಜಿ ಮಾಡುವ ಗಂಜಿ ಪೌಡರ್ ರೆಸಿಪಿ.

ತೂಕ ಇಳಿಕೆಯ ಆರೋಗ್ಯಕರ ಪಾನೀಯಗಳು – ಮನೆಯಲ್ಲೇ ಮಾಡುವ ಸರಳ ಡ್ರಿಂಕ್ಸ್.👇👇